ಹಣ ಸಂಪಾದಿಸುವುದು ಒಂದು ರೀತಿಯ ಕಷ್ಟವಾದರೆ, ಹಣ ಉಳಿಸುವುದು ಇನ್ನೊಂದು ರೀತಿಯ ಸಂಕಷ್ಟ. ಕೆಲವರು ಹೆಚ್ಚು ಸಂಪಾದಿಸಲು ಕಷ್ಟಪಡುತ್ತಾರೆ ಆದರೆ ಅವಕಾಶಗಳು ಸಿಗುವುದಿಲ್ಲ. ಇನ್ನು ಕೆಲವರು ಅಧಿಕ ಹಣ ಗಳಿಸುತ್ತಾರೆ ಆದರೆ ಉಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಹಣ ಸಂಪಾದಿಸಲಿ ಅಥವಾ ಮಾಡದೇ ಇರಲಿ – ಕೈಯಲ್ಲಿರುವ ಹಣವನ್ನು ಜೋಪಾನವಾಗಿ ಕಾಪಾಡಿಕೊಂಡು, ಪೈಸೆ ಪೈಸೆಯಾಗಿ ಲಕ್ಷ-ಕೋಟಿ ಮಾಡುವ ಕಲೆ ಕೆಲವರಿಗೆ ಮಾತ್ರ ಸಿಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಬುದ್ಧಿವಂತಿಕೆ ಹಾಗೂ ಜಾಣ್ಮೆ ಕೆಲವು ಗ್ರಹಗಳು ಆಳುವ ರಾಶಿಯವರಿಗೆ ಮಾತ್ರ ಇರುತ್ತದೆ. ಇವರು ಮಿತವ್ಯಯ ಮಾಡುವರು, ದೀರ್ಘಕಾಲದ ಹಣಕಾಸು ಯೋಜನೆ ಮಾಡಿ ಸಂಪತ್ತು ಹಿಂಬಾಲಿಸುವಂತೆ ಮಾಡುತ್ತಾರೆ. ಭವಿಷ್ಯವೂ ಉತ್ತಮವಾಗಿರುತ್ತದೆ.

ಜ್ಯೋತಿಷ್ಯದ ಪ್ರಕಾರ ಹಣ ಉಳಿತಾಯದಲ್ಲಿ ಅತ್ಯುತ್ತಮ ಕೌಶಲ್ಯ ಹೊಂದಿರುವ ಟಾಪ್ 5 ರಾಶಿಗಳು ಇಲ್ಲಿವೆ:
1. ವೃಷಭ ರಾಶಿ
ಶುಕ್ರನಿಂದ ಆಳಲ್ಪಡುವ ವೃಷಭ ರಾಶಿಯವರು ಐಷಾರಾಮಿ ಜೀವನಕ್ಕೆ ಆದ್ಯತೆ ನೀಡುತ್ತಾರೆ. ಆದರೆ ಸಾಧ್ಯವಿರುವ ಕಡೆಗಳಲ್ಲಿ ಹಣ ಉಳಿತಾಯ ಮಾಡಿ ಬೇಕಿರುವ ದುಬಾರಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಉಳಿಸಿ ಮಾಲ್‌ನಲ್ಲಿ ಖರ್ಚು ಮಾಡುವ ರೀತಿ. ಶ್ರದ್ಧೆಯಿಂದ ಕೆಲಸ ಮಾಡಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವಲ್ಲಿ ನಿಸ್ಸೀಮರು. ಖರ್ಚು ವೆಚ್ಚಗಳನ್ನು ಟ್ರ್ಯಾಕ್ ಮಾಡಿ, ನೂರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಲಾಭದಾಯಕ ಹೂಡಿಕೆಗಳನ್ನು ಬಲ್ಲವರು. ಸೌಂದರ್ಯಕ್ಕೆ ಆದ್ಯತೆ ನೀಡಿದರೂ ಉಳಿತಾಯದತ್ತ ಗಮನ ಹರಿಸುತ್ತಾರೆ.
2. ಕನ್ಯಾ ರಾಶಿ
ಬುಧನಿಂದ ಆಳಲ್ಪಡುವ ಕನ್ಯಾ ರಾಶಿಯವರು ಸೂಕ್ಷ್ಮ ಆಲೋಚನಾ ಶಕ್ತಿ ಹೊಂದಿರುತ್ತಾರೆ. ಪ್ರತಿಯೊಂದನ್ನೂ ಆಳವಾಗಿ ಯೋಚಿಸುವರು. ಬಜೆಟ್ ರಚಿಸುವಲ್ಲಿ ಪರಿಣಿತರು, ವೆಚ್ಚಗಳನ್ನು ಟ್ರ್ಯಾಕ್ ಮಾಡುತ್ತಾರೆ. ಪ್ರತಿನಿತ್ಯದ ಖರ್ಚನ್ನು ಲೆಕ್ಕಹಾಕಿ ಹೆಚ್ಚಾದರೆ ಕಡಿಮೆ ಮಾಡಿ, ಕಡಿಮೆ ಆದರೆ ಉಳಿಸುವ ಪ್ರಯತ್ನ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದರೂ ತಮ್ಮ ಲೆಕ್ಕದಲ್ಲಿ ಹೆಚ್ಚಾಗದಂತೆ ನೋಡಿಕೊಳ್ಳುತ್ತಾರೆ. ಹಣ ಉಳಿಸುವುದರ ಜೊತೆಗೆ ಗಳಿಸುವಲ್ಲೂ ಪರಿಣಿತರು.
3. ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹಣದ ವಿಷಯಗಳು ಮತ್ತು ಆರ್ಥಿಕ ಲಾಭದ ಬಗ್ಗೆ ಆಳವಾದ ತಿಳುವಳಿಕೆ ಹೊಂದಿರುತ್ತಾರೆ. ಹೂಡಿಕೆ ಮಾಡಿದರೆ ಲಾಭ ತೆಗೆಯುವುದೇ ಗುರಿ. ನಷ್ಟದ ಅಪಾಯ ತೆಗೆದುಕೊಳ್ಳಲು ಹೆದರುವುದಿಲ್ಲ. ಪ್ರಬಲ ಜ್ಞಾನದಿಂದ ಲಾಭ ಗಳಿಸುವ ಹೂಡಿಕೆ ಮಾಡುತ್ತಾರೆ. ಆರ್ಥಿಕ ಹಿನ್ನಡೆ ಬಂದರೂ ಬಲವಾಗಿ ಪುಟಿದೇಳುತ್ತಾರೆ. ನಷ್ಟಕ್ಕೆ ಹೆದರದೇ ಹಣ ಗಳಿಕೆ ಹಾಗೂ ಉಳಿತಾಯದ ಕಡೆಗೆ ಗಮನ ಹರಿಸುತ್ತಾರೆ.
4. ಧನು ರಾಶಿ
ಗುರು ಗ್ರಹದ ಆಳ್ವಿಕೆಯಲ್ಲಿರುವ ಧನು ರಾಶಿಯವರು ಸಂಪತ್ತು, ಸೌಕರ್ಯಗಳನ್ನು ಪಡೆಯಲು ಸದಾ ಪ್ರಯತ್ನಿಸುತ್ತಾರೆ. ಪ್ರಯತ್ನ ವಿಫಲವಾಗುವುದನ್ನು ಸಹಿಸುವುದಿಲ್ಲ. ಶ್ರಮದಿಂದ ಬಂದ ಹಣಕ್ಕೆ ಹೆಚ್ಚು ಗೌರವ ನೀಡುತ್ತಾರೆ. ವಿನಾಕಾರಣ ಖರ್ಚು, ಸಾಲ ನೀಡುವುದನ್ನು ಇಚ್ಛಿಸುವುದಿಲ್ಲ. ಒಂದು ವೇಳೆ ನೀಡಿದರೂ ಪ್ರತಿಯಾಗಿ ಪಡೆಯಲು ಯೋಚಿಸುತ್ತಾರೆ. ಹಣ ಉಳಿಸುವುದರ ಜೊತೆಗೆ ಗಳಿಸುವಲ್ಲೂ ಅಪಾರ ಬುದ್ಧಿವಂತಿಕೆ ಹೊಂದಿರುತ್ತಾರೆ.
5. ಮಕರ ರಾಶಿ
ಶನಿ ಗ್ರಹದ ಆಳ್ವಿಕೆಯಲ್ಲಿರುವ ಮಕರ ರಾಶಿಯವರು ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರುವಾಸಿಗಳು. ಸಣ್ಣ ವಸ್ತುವನ್ನೂ ಕಡೆಗಣಿಸುವುದಿಲ್ಲ. ಹಣದ ವಿಚಾರಕ್ಕೆ ಬಂದರೆ ಉಳಿತಾಯದಲ್ಲಿ ಅಗ್ರಸ್ಥಾನ. ಒಂದು ರೂಪಾಯಿಯನ್ನೂ ವ್ಯರ್ಥ ಮಾಡಲು ಬಯಸುವುದಿಲ್ಲ. ಒಂದೊಂದು ರೂಪಾಯಿಯನ್ನೂ ಕೂಡಿಡುತ್ತಾರೆ. ಲೆಕ್ಕ ತಪ್ಪಾದರೆ ಕಡಿವಾಣ ಹಾಕಿ ಉಳಿತಾಯ ಮಾಡುತ್ತಾರೆ. ಇವರ ಮನೆ ಬಾಗಿಲಿಗೆ ಹಣ ಹರಿದು ಬರುತ್ತದೆ.
ಈ ರಾಶಿಯವರು ಹಣಕಾಸು ವಿಷಯದಲ್ಲಿ ಚತುರರು ಮತ್ತು ಭದ್ರ ಉಳಿತಾಯದ ಮೂಲಕ ಶ್ರೀಮಂತರಾಗುವ ಸಾಧ್ಯತೆ ಹೆಚ್ಚು. ನಿಮ್ಮ ರಾಶಿ ಈ ಪಟ್ಟಿಯಲ್ಲಿದೆಯೇ? ಕಾಮೆಂಟ್‌ನಲ್ಲಿ ಹೇಳಿ.